Type Here to Get Search Results !

Paatashaala Song [Yuvaratna] Lyrics in Kannada - Vijay Prakash

ಯುವರತ್ನ ಕನ್ನಡ ಚಿತ್ರದ ಪಾಠಶಾಲಾ ಲಿರಿಕ್ಸ್. ಪಾಠಶಾಲಾ ಎಂಬುದು ನಮ್ಮ ಜೀವನದ ಎಲ್ಲಾ ಶಿಕ್ಷಕರಿಗೆ ಮೀಸಲಾಗಿರುವ ಕನ್ನಡ ಗೀತೆಯಾಗಿದ್ದು, ಇದನ್ನು ಹೊಂಬಾಲೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಸಂತೋಷ್ ಆನಂದ್ರಾಮ್ ಅವರು ಪಾಠಶಾಲಾ ಹಾಡಿನ ಸಾಹಿತ್ಯವನ್ನು ರಚಿಸಿದ್ದಾರೆ ಮತ್ತು ಸಂಗೀತವನ್ನು ತಮನ್ ಎಸ್.

ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಪಾಠಶಾಲಾ ವಿಡಿಯೋ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್, ಸಯೇಶಾ, ಸೋನು ಗೌಡ ಮತ್ತು ಧನಂಜಯ್ ಮುಖ್ಯ ಪಾತ್ರದಲ್ಲಿದ್ದಾರೆ.


Paatashaala Song [Yuvaratna] Lyrics in Kannada - Vijay Prakash


Paatashaala Song Lyrics in Kannada


Singer Vijay Prakash
Music Thaman S
Song Writer Santhosh Ananddram

ದೇಶಕ್ಕೆ ಯೋಧ, ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ..
ಅಕ್ಷರ ಕಲಿಸೋ, ಅಜ್ಞಾನ ಅಳಿಸೋ
ಅವನೂನು ಅನ್ನದಾತಾನೇ..
ತಪ್ಪು ಸರಿಯ ತಿದ್ದಿ ತಿಳಿ ಹೇಳಿ ಸಮ ಬುದ್ದಿ
ನಮ್ಮ ಚಿತ್ತ ಶುದ್ದಿ ಆಗೋ ಹಾದಿ
ಎಷ್ಟೇ ದೂರ ಹೋದರು ಮರಿಬೇಡ ನಿನ ಬೇರು
ನಿನ್ನ ಸಾಧನೆಗೆಲ್ಲ ಇದುವೇ ಆದಿ

ಪಾಠಶಾಲಾ.. ಪಾಠಶಾಲಾ.. (X2)

ದೇಶಕ್ಕೆ ಯೋಧ, ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ..
ಅಕ್ಷರ ಕಲಿಸೋ, ಅಜ್ಞಾನ ಅಳಿಸೋ
ಅವನೂನು ಅನ್ನದಾತಾನೇ..

ಪ್ರತಿಯೊಂದು ಮಾತು ಕಲಿತ ಜಾಗ
ಪ್ರತಿ ಹೆಜ್ಜೆ ಗುರುತು ಅರಿತ ಜಾಗ
ಕನಸುಗಳ ಜೊತೆಗೆ ನಡೆದ ಜಾಗ
ಸ್ನೇಹಿತರ ಪ್ರೀತಿ ಪಡೆದ ಜಾಗ
ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ
ಜ್ಞಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ
ಮನೆಯೇ ಮೊದಲ ಶಾಲೆ ತಾಯಿನೆ ಗುರುವು
ತಾಯಿಗೂ ಪಾಠ ಹೇಳಿದ ಗುರುವೇ ಅರಿವು

ಎಲ್ಲ ದಾನಕು ಶ್ರೇಷ್ಠ ವಿದ್ಯೆ ಎನ್ನುವುದನ್ನು
ತಿಳಿದ ದೇಶ ನಮದು ವಿಶ್ವದ ಕಣ್ಣು
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು
ನಂಬಿ ನಡೆದರೆ ಸಾಕು ಸಾರ್ಥಕ ಬದುಕು

ಪಾಠಶಾಲಾ.. ಪಾಠಶಾಲಾ.. (X2)

ಬೆರೆಯೋದು ಹೇಗೆ ಕಂಡಿದ್ದಿಲ್ಲಿ
ಜೊತೆಯಾಗಿ ಹಂಚಿ ತಿಂದಿದ್ದಿಲ್ಲಿ
ಹಿರಿಯರಿಗೆ ತಲೆಬಾಗಿ ನಿಂತಿದ್ದಿಲ್ಲಿ
ಬದುಕುವ ರೀತಿ ಕಲಿತಿದ್ದಿಲ್ಲಿ
ಶಿಕ್ಷಣ ಶಿಕ್ಷೆ ಅಲ್ಲ
ನಮ್ಮ ಕಾಯುವ ರಕ್ಷೆ
ಪುಸ್ತಕ ಹಿಡಿದ ಕೈಯಿ ಸರಿ ದಾರಿಯ ನಕ್ಷೆ
ತಂದೆ ತಾಯಿ ದುಡಿಮೆ ನಮ್ಮ ಬೆಳವಣಿಗೆ
ತಿದ್ದೋ ಗುರುವಿನ ತಾಳ್ಮೆ ನಮ್ಮ ಬರವಣಿಗೆ

ಓದಿಸುವವರಿಗೆ ಮಾತ್ರ ಸಿರಿತನ ಬಡತನ ಎಲ್ಲ
ಓದೋ ಮನಗಳಿಗೆ ಯಾವುದು ಇಲ್ಲ
ಪದವಿ ಅಂಕೆ ಇದ್ದಾರೆ ನೀ ಗೆದ್ದ ಹಾಗಲ್ಲ
ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ

ಪಾಠಶಾಲಾ.. ಪಾಠಶಾಲಾ.. (X2)



Post a Comment

0 Comments
* Please Don't Spam Here. All the Comments are Reviewed by Admin.