Ninna Gungalli Song Lyrics in Kannada - Adhvik

ಅಧ್ವಿಕ್ ಚಲನಚಿತ್ರದ ನಿನ್ನಾ ಗುಂಗಲ್ಲಿ ಹಾಡಿನ ಸಾಹಿತ್ಯ. ಅಧ್ವಿಕ್ ಮೂವಿ ನಿರ್ದೇಶಕ ದಿನೇಶ್ ವಿ, ಅಧ್ವಿಕ್ ಮತ್ತು ನಿನ್ನಾ ಗುಂಗಲ್ಲಿ ಹಾಡಿನ ಸಾಹಿತ್ಯವನ್ನು ಅಧ್ವಿಕ್, ನವೀನ್ ಡಿಇ, ಮತ್ತು ಅರ್ಜುನ್ ಕಿಶೋರ್ ಚಂದ್ರ ಬರೆದಿದ್ದಾರೆ, ಸಂಗೀತವನ್ನು ಕನ್ನಡ ಆಲ್ಬಮ್ ಸಂಯೋಜಿಸಿದ್ದಾರೆ. ದಿನೇಶ್ ವಿ, ಅಧ್ವಿಕ್ ಮತ್ತು ನಿನ್ನಾ ಗುಂಗಲ್ಲಿ ಸಾಂಗ್ ಹಾಡನ್ನು ಅಧ್ವಿಕ್ ಹಾಡಿದ್ದಾರೆ. ಚಲನಚಿತ್ರದಲ್ಲಿ ನಟಿಸಿದ ಚಿತ್ರ, ಪೂಜಾ ಪುರಾಡ್. ನಿನ್ನಾ ಗುಂಗಳ್ಳಿ ಅಧಿಕೃತ ಸಾಹಿತ್ಯ ವಿಡಿಯೋ ಸಾಂಗ್ ಆಗಿದ್ದು, ಸಂಗೀತವನ್ನು ಅಧ್ವಿಕ್ ಸಂಯೋಜಿಸಿದ್ದಾರೆ.


Ninna Gungalli Song Lyrics in Kannada 

Ninna Gungalli Song Lyrics in Kannada - Adhvik
Singer Adhvik
Music Adhvik
Song Writer Adhvik, Arjun Kishor Chandra, Naveen D.E

ಕೇಳದೇ ಬಂದೇ ನೀನು
ಹೇಳದೇ ನನ್ನ ಮನಸಲ್ಲಿ
ಕಣ್ಣಿಗೆ ಕಾಣದಾ ಈ ಪ್ರೀತಿ ಎಂಬ ರಂಗು ಚೆಲ್ಲಿ
ಕಾಣದೆ ಹೋದೆ ಎಲ್ಲಿ, ಕಾಡಿದೆ ನಿನ್ನ ನೆನಪಿಲ್ಲಿ
ಯಾರನ್ನೇ ಕಂಡರೂ ನಿನ್ನೇ ಕಾಣುವೆ ಅಲ್ಲಿ
ಹುಡುಕೋ ದಾರಿ ನಿನ್ನಲಿ ಸೇರಿ, ನೀ ಸಿಕ್ಕರೇ ಸಾಕು
ಬೇಡುವೆ ಸಾರಿ ಭಯವ ಮೀರಿ ನಿನ್ನ ಒಲವೇ ಬೇಕು
ಪ್ರೀತಿಯ ತೋರಿ ಒಮ್ಮೆಲೇ ಜಾರಿ ಎಲ್ಲಿಗೆ ಹೋದೇ ನೀನು ಪ್ರತಿಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ, ಕಾದು ಕುಂತೆ ನಾ
ಕಾದು ಕುಂತೆ ನಾ, ಕೊರಗಿ ಸೋತೆ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ

ಏನಾದರೂ ನೂರು, ಹುಡುಕಾಡುತ ಸೇರುವೆನು
ಇರಲಾರೆನು ನಾ ಇನ್ನೆಂದೂ ನಿನ್ನ ಮರೆತು
ನಡೆದ ದಾರಿಯ ತುಂಬ, ನಿನ್ನದೇ ಹೆಜ್ಜೆಯ ಗುರುತು
ಕುಂತ ಜಾಗವೆಲ್ಲಾ ಕೇಳಿವೆ ನಿನ್ನನೇ ಕುರಿತು
ನಿನ್ನ ಹುಡುಕಲು ಕೈ ಚಾಚಿ ಹೆಸರ ಎಲ್ಲೆಡೆ ಗೀಚಿ
ಮಾಯವಾದೇ ನೀನು ಈಗ ನನ್ನ ಪ್ರೀತಿಯ ದೋಚಿ
ಇಬ್ಬನಿಯಂತೆ ಕಂಬನಿ ಸುರಿಸಿ, ಕಾಯುವೆ ನಾ ನಿನ್ನರಸಿ
ಪ್ರತಿ ಉಸಿರಲ್ಲೂ ನಾ

ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ
ಕಾದು ಕುಂತೇ ನಾ
ಕಾದು ಕುಂತೇ ನಾ
ಕೊರಗಿ ಸೋತೇ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ
ನಿನ್ನ ಗುಂಗಲ್ಲೇ.



Post a Comment

0 Comments